Monday, December 18, 2006

ಸಖೀಗೀತ - ಹುಬ್ಬಳ್ಳಿಯಾಂವಾ - ದ.ರಾ. ಬೇಂದ್ರೆ (ಅಂಬಿಕಾತನಯದತ್ತ) |

ಹುಬ್ಬಳ್ಳಿಯಾಂವಾ
(ಸಖೀಗೀತ - ಕವನ ಸಂಗ್ರಹ)

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ || ಪಲ್ಲವಿ ||

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
ಇನ್ನೂ ಯಾಕ ಬರಲಿಲ್ಲ ..................

ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ ಬರಲಿಲ್ಲ ...............

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಆ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
ಇನ್ನೂ ಯಾಕ ಬರಲಿಲ್ಲ ..............

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ ಬರಲಿಲ್ಲ ..............

ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ ಬರಲಿಲ್ಲ.............

ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
ಇನ್ನೂ ಯಾಕ ಬರಲಿಲ್ಲ ..............

9 Comments:

At 7:09 AM, Blogger bhadra said...

ಕನ್ನಡ ಕವಿಗಳ ಕವನಗಳ ಸಂಕಲನ ಒಂದೆಡೆ ಒಟ್ಟು ಮಾಡುತ್ತಿರುವುದು ಸತ್ಕಾರ್ಯ. ಮೊದಲ ಮೂರು ಕವನಗಳ ಜೆಪಿಜಿ ರೂಪವನ್ನೂ ಬರಹಕ್ಕಿಳಿಸಿದರೆ ಇನ್ನೂ ಉತ್ತಮ ಎಂದೆನಿಸುತ್ತಿದೆ.

ಒಳ್ಳೆಯ ಕೆಲಸ ಅನವರತ ಮುಂದುವರೆಯಲಿ.

 
At 8:17 AM, Blogger aequo animo (advocatus diaboli) said...

hey nice blog,and a excellent poems. thanks

 
At 12:38 AM, Blogger dinesh said...

ಇನ್ನು ಯಾಕ ಬರಿಲಿಲ್ಲಪ್ಪ.. ಒಳ್ಳೆ ಪದ್ಯಾನಾ..? ಬೇಕಾದಷ್ಟು ಇದ್ದಾವಲ್ಲಾ ಬೇಂದ್ರೆ ಅಜ್ಜಾ ಬರೆದಿದ್ದ.. ತುಂಬಾ ಧನ್ಯವಾಧಗಳು...

 
At 3:21 AM, Blogger Unknown said...

This comment has been removed by the author.

 
At 3:21 AM, Blogger Unknown said...

Long poem.. I liked your mysore mallige song better! One more thing. I don't know whether you approve.. this huballi plan is going to make North Karnataka an important point on the IT map!

--------------------
http://quillpad.in/kannada/
The one true Indian site to Offer Kannada language solutions with middle english options.
Fast, Reliable and comfortable! Intuitive! :-)

 
At 3:43 PM, Blogger Harisha - ಹರೀಶ said...

ಒಂದು ವಿಷಯ: ನಾನು ಹಾಡು ಕೇಳುವಾಗ ಪಲ್ಲವಿಯಲ್ಲಿ "ವಾರದಾಗ ಮೂರುಸರತಿ ಬಂದು ಹೋಗಂವಾ" ಎಂದು ಕೇಳಿದ್ದೇನೆ. ಆದರೆ ಇಲ್ಲಿ "ವಾರದಾಗ ಮೂರುಸರತಿ ಬಂದು ಹೋದಂವಾ" ಎಂದು ಬರೆದಿದ್ದೀರಿ. ಸ್ವಲ್ಪ ಇದರ ಬಗ್ಗೆ ಸ್ಪಷ್ಟನೆ ನೀಡುತ್ತೀರಾ?

 
At 2:21 AM, Blogger ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

 
At 8:19 AM, Blogger S.. Diva said...

this one is like "anna baralilla yaaka".. do you also have the lyrics of that song?

 
At 7:04 PM, Blogger Satish said...

Enigma...
yaake bareeta illa?
I am back on antaranga… take a look!

 

Post a Comment

<< Home